ಕರ್ನಾಟಕ ರಾಜ್ಯ ದೇವಾಂಗ ಸಂಘ ನಡೆದು ಬಂದ ದಾರಿ

ಲೇಖನ: ಪ್ರೊ. ಸಿ. ಎಲ್. ಧನಪಾಲ್

ಕಾರ್ಯದರ್ಶಿ, ಕರ್ನಾಟಕ ರಾಜ್ಯ ದೇವಾಂಗ ಸಂಘ

2022-23 ನೇ ಸಾಲಿನ ವಿಶೇಷ ಸರ್ವಸದಸ್ಯರ ಸಭೆಯ ಸಂದರ್ಭದಲ್ಲಿ ‘ಕರ್ನಾಟಕ ರಾಜ್ಯ ದೇವಾಂಗ ಸಂಘ, ನಡೆದು ಬಂದ ದಾರಿ” ಬಗ್ಗೆ ಹಾಗೂ ಹಲವಾರು ವಿಷಯಗಳ ಹಾಗೂ ಗುರಿ ಉದ್ದೇಶಗಳನ್ನು ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಳ್ಳಲು ಕರ್ನಾಟಕ ರಾಜ್ಯ ದೇವಾಂಗ ಸಂಘದ ಕಾರ್ಯದರ್ಶಿ ಪ್ರೊ.ಸಿ.ಎಲ್. ಧನಪಾಲ್ ಆದ ನಾನು ಇಚ್ಛಿಸುತ್ತೇನೆ.

“ಸಂಘ ಶಕ್ತಿ ಕಲಿ ಯುಗೇ ಯುಗೇ” (ಈ ಶತಮಾನದಲ್ಲಿ ಸಂಘಟನಾ ಶಕ್ತಿಗಿಂತಲೂ ಮತ್ತೊಂದು ದೊಡ್ಡ

ಶಕ್ತಿಯಿಲ್ಲ ಎನ್ನುವ ಅರ್ಥ) ಎಂಬ ಮೂಲ ಮಂತ್ರದೊಂದಿಗೆ, ರಾಜ್ಯ ಸಂಘವು 2005ರಲ್ಲಿ ಅಸ್ತಿತ್ವವನ್ನು ಪಡೆಯಿತು. 50 ಜನ

ಸದಸ್ಯತ್ವದೊಂದಿಗೆ ಪ್ರಾರಂಭವಾದ ಸಂಘಕ್ಕೆ ನಮ್ಮ ದೇವಾಂಗ ಸಮಾಜದ ಹಿರಿಯ ನಾಯಕರು, ಮಾಜಿ ಶಾಸಕರು ಅದ

ಶ್ರೀಯುತ ಎಂ.ಡಿ. ಲಕ್ಷ್ಮೀನಾರಾಯರವರು ಅಧ್ಯಕ್ಷರಾದರು. ಶ್ರೀಯುತ ಎಂ.ಡಿ.ಎಲ್. ರವರು ಸತತವಾಗಿ 10 ವರ್ಷಗಳ ಕಾಲ ರಾಜ್ಯದ ಮೂಲೆ ಮೂಲೆಗಳಿಗೂ ಸುತ್ತಾಡಿ ನಮ್ಮ ಸಮಾಜದ ಜನಗಳಲ್ಲಿ “ದೇವಾಂಗ ಪ್ರಜ್ಞೆಯನ್ನು ಮೂಡಿಸಿದ ಕೀರ್ತಿ ಅವರಿಗೆ ಸಲ್ಲಬೇಕಾಗಿದೆ. ಅಂದಿನಿಂದ ಇಂದಿನವರೆಗೂ ಒಬ್ಬ ರಾಜಕಾರಣಿಯಾಗಿ, ಏಳು-ಬೀಳುಗಳನ್ನು ಕಂಡು ಇಂದಿಗೂ ಸಮಾಜಸೇವೆಯಲ್ಲಿ ತೊಡಗಿದ್ದಾರೆ. 2015 ರಲ್ಲಿ ಡಾ| ಜಿ.

ರಮೇಶ್‌ (ಹಿರಿಯ ಪೊಲೀಸ್ ಅಧಿಕಾರಿಯಾಗಿ ನಿವೃತ್ತಿಯ ನಂತರ) ರವರು ಅಧ್ಯಕ್ಷರಾದರು. ಹೊಸ ಹುರುಪು, ಉತ್ಸಾಹ, ದೇವಾಂಗ ಸಮಾಜವನ್ನು ಎತ್ತರಕ್ಕೆ ಕೊಂಡಯ್ಯಬೇಕೆಂಬ ಅದಮ್ಯವಾದ ಬಯಕೆ, ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ, ಒಂದು ತಂಡವನ್ನು ರಚಿಸಿ, ರಾತ್ರಿ ಹಗಲು ಎನ್ನದೇ, ರಾಜ್ಯವನ್ನು ಸುತ್ತಾಡಿ ರಾಜ್ಯ ಸಂಘ ಗಟ್ಟಿಯಾಗಿ ನಿಂತು ಪರಿಣಾಮಕಾರಿಯಾಗಿ, ಕಾರ್ಯನಿರ್ವಹಿಸಲು ಕಾರಣಕರ್ತರಾದರು. ಡಾ| ಜಿ. ರಮೇಶ್‌ರವರ ಅವಧಿಯನ್ನು ನನ್ನ ದೃಷ್ಟಿಯಲ್ಲಿ ಆದೊಂದು “ದೇವಾಂಗ ಸಮಾಜದ ಪರ್ವಕಾಲ~ ಎಂದು ಭಾವಿಸುತ್ತೇನೆ. 150 ಸದಸ್ಯರಿಂದ 5ಸಾವಿರ ಸದಸ್ಯರಾಗಲು ಅವರ ಪ್ರಾಮಾಣಿಕ ಪ್ರಯತ್ನ ಹಾಗೂ ಸಂಘಟನೆ ಹಾಗೂ ಜಾಗೃತಿ ಮೂಡಿಸಲು ನಡೆದಂತಹ ಕಾರ್ಯಕ್ರಮಗಳು, ಸಮಾವೇಶಗಳು ಬಹು ಮುಖ್ಯ ಕಾರಣವಾಯಿತು.

2013ರಲ್ಲಿ ಡಾ.ಜೆ. ರಮೇಶ್‌ರವರ ನಾಯಕತ್ವದಲ್ಲಿ ನಡೆದ ಹೊಸದುರ್ಗ ದೇವಾಂಗ ಸಮಾವೇಶ ಸಮಾಜ ಬಾಂಧವರಲ್ಲಿ ಒಂದು ಸಂಚಲನವನ್ನೇ ಉಂಟುಮಾಡಿ, “ದೇವಾಂಗ ಜಾಗೃತಿಗೆ ಭದ್ರ ಬುನಾದಿ ಹಾಕಿತು. 2016 ರಲ್ಲಿ ರಾಜ್ಯಮಟ್ಟದ ಬೃಹತ್ ದೇವಾಂಗ ಸಮಾವೇಶವನ್ನು ರಾಜ್ಯ ಸಂಘದ ಅಡಿಯಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಯಿತು. ಕರಾವಳಿ ಭಾಗದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ದೇವಾಂಗ ಬಂಧುಗಳಿದ್ದಾರೆ ಎಂದು ಅರಿವಾಗಿದ್ದೇ, ಮಂಗಳೂರಿನ ಸಮಾವೇಶದ

“ನಾವು, ನಮ್ಮವರು, ನಾವೆಲ್ಲರೂ ಒಂದೇ’ ಎಂಬ ಭಾವನಾತ್ಮಕ ವಿಚಾರ ಬರುವುದಕ್ಕೆ ಕಡಲತೀರದ ಮಂಗಳೂರಿನ ಸಮ್ಮೇಳನ | ಈರಣವಾಯಿತು. ಈ ಸಮಾವೇಶದಿಂದ ಸಮಯಪ, ಶಿಸ್ತುಪಾಲನೆ, ಜನಜಾಗೃತಿ, ಅತಿಥಿಗಳನ್ನು ಬರಮಾಡಿಕೊಳ್ಳುವ ಸತ್ಕರಿಸುವ ರೀತಿ, ಇವೆಲ್ಲವೂ ಮಂಗಳೂರು ಸಮಾವೇಶದ ಹೆಗ್ಗಳಿಕೆ, ಈ ಸಮಾವೇಶದ ಯಶಸ್ಸಿಗೆ ಮೂಲಕಾರಣ ಅಂದಿನ ನಮ್ಮ ಸಂಘದ ಕೋಶಾಧಿಕಾರಿ, ಇಂದಿನ ರಾಜ್ಯಸಭಾ ಸದಸ್ಯರಾದ ಶ್ರೀ ಕೆ. ನಾರಾಯಣ ಹಾಗೂ ಅವರ ತಂಡಕ್ಕೆ ಸಲ್ಲಬೇಕಾಗಿದೆ. ಮಂಗಳೂರು ಸಮಾವೇಶದ ಮಧುರವಾದ ನೆನಪುಗಳು ಸದಾಕಾಲ ಸಮಾಜ ಬಾಂಧವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ ಎಂದರೆ, ಆ ಗೌರವ ಶ್ರೀ ಕೆ. ನಾರಾಯರವರಿಗೆ ಸಲ್ಲಬೇಕಾಗುತ್ತದೆ.

“2019ರಲ್ಲಿ ರಾಜ್ಯಮಟ್ಟದ ತರೀಕೆರೆ ಸಮಾವೇಶ” ಸುಮಾರು 40 ಸಾವಿರ ದೇವಾಂಗ ಬಂಧುಗಳು ಸೇರಿ, ಸಮಾವೇಶ ಯಶಸ್ವಿಯಾಗಿ ಜನಜಾಗೃತಿಯನ್ನು ಉಂಟುಮಾಡಿತು. “ಶಿಕ್ಷಣ, ಸಾಮಾಜಿಕ ನ್ಯಾಯ, ಸಂಘಟನೆ, ನೇಕಾರಿಕೆ ಉಳಿಸಿ ಬೆಳಸಿ, ಆ ಸಮಾವೇಶದ ಸಂದೇಶವಾಗಿತ್ತು.

ರಾಜ್ಯ ಸಂಘವು ದಿನಾಂಕ: 18-04-2021 ರಂದು ಪ್ರಜಾಸತ್ತಾತ್ಮಕ ಮಾದರಿಯಲ್ಲಿ (ಡೆವಾರ್ಟಿ ವೇ) ಮುಕ್ತ ಚುನಾವಣೆಯ ಮೂಲಕ ಸಂಘಕ್ಕೆ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.

2015 ರಿಂದ 2022 ರವರೆಗೂ ರಾಜ್ಯ ಸಂಘರ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಶ್ರೀಯುತ ರವೀಂದ್ರ ಕಲಬುರ್ಗಿರವರು 2022 ಜುಲೈನಿಂದ ಸಂಘದ ಅಧ್ಯಕ್ಷರಾಗಿ, ಆಡಳಿತದ ಋಕ್ಕಾಣಿಯನ್ನು ಹಿಡಿದಿದ್ದಾರೆ. ಒಂದು ವರ್ಷದ ಆವಧಿಯಲ್ಲಿಯೇ ಸಂಘಕ್ಕೆ 1000 ಸದಸ್ಯರನ್ನು ಮಾಡಿದ ಹಿರಿಮೆ ಗರಿಮೆ ಅವರದ್ದಾಗಿದೆ ಹಾಗೂ ಈಗಾಗಲೇ ಆರು ಜಿಲ್ಲಾ ದೇವಾಂಗ ಸಂಘಗಳು ಅಸ್ತಿತ್ವಕ್ಕೆ ಬದಲು ಕಾರಕರ್ತ ರಾಗಿದ್ದಾರೆ. ಸದಾಕಾಲ ಸಮಾಜದ ಬಂಧುಗಳ ಬಗ್ಗೆ ಹೆಚ್ಚಿನ ಕಾಳಜಿ, ಕಳಕಳಿಯನ್ನು ಹೊಂದಿದ್ದು, ಇಡೀ ಉತ್ತರ ಕರ್ನಾಟಕದಲ್ಲಿ ರವಿಯಣ್ಣ’ ಎಂದೇ ಜನಪ್ರಿಯರಾಗಿದ್ದು, ದಕ್ಷಿಣ ಕರ್ನಾಟಕದ ನಮ್ಮ ಭಾಗದಲ್ಲಿಯೂ ಜನರ ಪ್ರೀತಿ ವಿಶ್ವಾಸಗಳಿಗೆ ಭಾಜನರಾಗಿದ್ದಾರೆ. ಮೂಲತಃ ರಾಜಕಾರಣಿಯಾಗಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಜವಾಬ್ದಾರಿಯುತವಾದ ಸ್ಥಾನವನ್ನು ಪಡೆದಿದ್ದರೂ, ಸಮಾಜದ ಬಂಧುಗಳ ಬಗ್ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ಸದಾಕಾಲ ದೇವಾಂಗ ಸಮಾಜದ ಬಗ್ಗೆ ಚಿಂತನೆ ಕಾಳಜಿ ಹೊಂದಿದ್ದು ಸಂಘಟನಾ ಮನೋಭಾವನೆಯಿಂದ ಸಂಘದ ಸದಸ್ಯತ್ವದ ಅಭಿಯಾನಕ್ಕೆ ಹೆಚ್ಚು ಒತ್ತುಕೊಟ್ಟು ಸಂಘವನ್ನು ಮುನ್ನಡೆಸುತ್ತಿರುವರು, ಸದಾ ಹಸನ್ಮುಖಿಯಾಗಿದ್ದು, ಸರಳ ಸಜ್ಜನಿಕೆಗೆ ಕಾಯಕ ನಿಷ್ಠೆಗೆ ಮತ್ತೊಂದು ಹೆಸರೇ ರವೀಂದ್ರ ಕಲಬುರ್ಗಿಯವರು.

2022 ರಲ್ಲಿ ಶಿವಮೊಗ್ಗದ ಶ್ರೀ . ರಾಜೇಶ್ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕವಾದರು. ಸಂಘದ ಬಗ್ಗೆ ಸಮಾಜದ ಬಗ್ಗೆ ಅಪಾರವಾದ ಗೌರವ ಅಭಿಮಾನವನ್ನು ಹೊಂದಿದ್ದು, ಸಂಘದ ಬೆಳವಣಿಗೆಗೆ ಕೈಜೋಡಿಸಿದ್ದು, ಅಧ್ಯಕ್ಷರ ಜೊತೆಜೊತೆಯಲ್ಲಿ ಪ್ರವಾಸ ಮಾಡಿ ಆರು ಜಿಲ್ಲಾ ದೇವಾಂಗ ಸಂಘಗಳ ಸ್ಥಾಪನೆಗೆ ಇವರು ಕಾರಣಕರ್ತರಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ, ರಾಜ್ಯ ಸಂಘವು ಇಂದು, ಒಂದು ಸಮರ್ಥವಾದ ತಂಡವಾಗಿದ್ದು, ಆರು ಜನ ಉಪಾಧ್ಯಕ್ಷರುಗಳಾದ ಶ್ರೀಮತಿ ಹೆಚ್. ಪಾರ್ವತಿ, ಶ್ರೀ ಎಸ್. ಸಿ. ಸತೀಶ್, ಶ್ರೀ ಜೆ. ಕಾಂತರಾಜ್‌, ಶ್ರೀ ವಿರೂಪಾಕ್ಷಪ್ಪ ಗೂಳಿ, ಶ್ರೀ ಶಂಕ್ರಪ್ಪ ಎಂ. ಮುರಸಿ, ಶ್ರೀ ಆಶೋಕ ಹೊನ್ನಳ್ಳಿ, ಕಾರ್ಯದರ್ಶಿ ಪ್ರೊ. ಸಿ.ಎಲ್, ಧನಪಾಲ್, ಕೋಶಾಧಿಕಾರಿ ಶ್ರೀ ಹೆಚ್. ಕೆ. ಪರಮೇಶ್ವರಪ್ಪ, ಪ್ರಧಾನ ಸಂಘಟನಾ ಕಾರ್ಯದರ್ಶಿ ಶ್ರೀ ಟಿ. ಆರ್. ಉಮಾಪತಿಯಪ್ಪ, ಮಾಧ್ಯಮ ಕಾರ್ಯದರ್ಶಿ ನೋವಿನಕೆರೆ ಡಿ. ಲಿಂಗರಾಜು ಹಾಗೂ ಆರು ಜನ ಸಹ ಕಾರ್ಯದರ್ಶಿಗಳಾದ ಶ್ರೀ ಎಸ್‌. ಸುರೇಶ್‌, ಶ್ರೀ ಪಿ. ಸಿ. ಲಕ್ಷ್ಮೀನಾರಾಯಣ, ಶ್ರೀ ಸಿ. ಎಸ್. ರವಿಕುಮಾರ್, ಶ್ರೀ ಲಕ್ಷ್ಮೀಕಾಂತ ಎಸ್, ಹಲಗೂರ, ಶ್ರೀ ಶ್ರೀಧರ ಶಂಕಪ್ಪ ಪಾಠಾಳಿ ಹಾಗೂ ಶ್ರೀ ಗದ್ದಿ ವಿರುಪಾಕ್ಷಪ್ಪ ಮತ್ತು 25 ಜನ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಹಾಗೂ 5 ಜನ ನಿರ್ದೇಶಕರುಗಳಿಂದ (5 ಜನ ಗೌರವ ಸದಸ್ಯರು) ರಾಜ್ಯ ಸಂಘವು ತನ್ನ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಕಳೆದ 18 ವರ್ಷಗಳಿಂದ ಅಂದರೆ, ಶ್ರೀಯುತ ಎಂ.ಡಿ.ಎಸ್, ಡಾ| ಜಿ. ರಮೇಶ್‌ ಹಾಗೂ ಶ್ರೀಯುತ ರವೀಂದ್ರ ಕಲಬುರ್ಗಿ ಅವರ ಉತ್ತಮ ನಾಯಕತ್ವದ ಫಲವಾಗಿ (ಉಜ ಐಡಿಜೆ) ಕರ್ನಾಟಕ ರಾಜ್ಯ ದೇವಾಂಗ ಸಂಘ ಪ್ರಗತಿಯ ಪಥದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ.

ರಾಜ್ಯ ಸಂಘದ ಸದಸ್ಯತ್ವದ ಅಭಿಯಾನ, ಸಮಾಜದ ಜನಗಣತಿ, ಹಿರಿಯರಿಗೆ ನಮನ, ವಿದ್ಯಾನಿಧಿ ಯೋಜನೆ, ದೇವಾನಿಗೆ ಸಮಾಜದ ಸಂಸ್ಕೃತಿ, ಇತಿಹಾಸ, ಕುಲಶಾಸ್ತ್ರದ ಬಗ್ಗೆ ಬೆಳಕು ಚೆಲ್ಲುವುದು, ಸಮಾಜದ ಪ್ರತಿಯೊಬ್ಬರಲ್ಲೂ ಸಾಮಾಜಿಕ, ರಾಜಕೀಯ ಪ್ರಜ್ಞೆಯನ್ನು ಮೂಡಿಸುವುದು, ರಾಜಕೀಯ ಸಂಘಟನಾ ಶಕ್ತಿಯನ್ನು ಬೆಳೆಸುವುದು, ಈ ಮೇಲಿನ ಎಲ್ಲ ಅಂಶಗಳೇ ರಾಜ್ಯ ಸಂಘದ ಗುರಿಯಾಗಿದೆ. ಕರ್ನಾಟಕ ರಾಜ್ಯ ಸಂಘವು ಕಳೆದ ಹಲವು ವರ್ಷಗಳಿಂದ ಸಾಧನೆಯ ಹಾದಿಯಲ್ಲಿ ನಡೆಯುತ್ತಾ ಬಂದಿದೆ ಎಂಬುದನ್ನು ನಿಮ್ಮೆಲ್ಲರ ಗಮನಕ್ಕೆ ತರಲು ಇಚ್ಚಿಸುತ್ತೇನೆ.

ಸಮಾಜದ ಪ್ರತಿಭಾವಂತ ಮಕ್ಕಳು ಸಮಾಜಮುಖಿಯಾಗಬೇಕು, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು, ಕುಟುಂಬ ಮತ್ತು ಸಮಾಜಕ್ಕೆ ಆಸರೆಯಾಗಬೇಕು. ಇವೆಲ್ಲವನ್ನೂ ಸಾಧಿಸಬೇಕೆಂದರೆ ಅವರುಗಳಿಗೆ ಶಿಕ್ಷಣವನ್ನು ನೀಡುವುದು ಸಮಾಜದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸಂಘವು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟು ಅವರ ಬೆಳವಣಿಗೆಗೆ ಸಹಾಯಕವಾಗದೆ ವಿದ್ಯಾವಿ” ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪ್ರತಿವರ್ಷ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಂಡು ಬಂದಿರುವುದು ರಾಜ್ಯ ಸಂಘದ ಹೆಗ್ಗಳಿಕೆಯಾಗಿದೆ. ಈ ಕೆಳಕಂಡಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರತಿಭಾ ಪುರಸ್ಕಾರ ಯಶಸ್ವಿ ಕಾರ್ಯಕ್ರಮವನ್ನು ಮಾಡಿದೆ.

2016-17 ಶ್ರೀಮಠ, ನೆಲವಂಗಲ, ಬೆಂಗಳೂರು. 2017-18 ಶ್ರೀ ಬಾದಾಮಿ ಬನಶಂಕರಿ ಕ್ಷೇತ್ರ, 2018-19 ಶ್ರೀಮತ ನೆಲಮಂಗಲ, ಬೆಂಗಳೂರು. 2021-22 ಹುಬ್ಬಳ್ಳಿ ಧಾರವಾಡ, 2022-23 ರಂದ ಕಲಾಕ್ಷೇತ್ರ, ಬೆಂಗಳೂರು,

ರಾಜ್ಯ ದೇವಾಂಗ ಸಂಘ ಹಾಗೂ ರಾಜ್ಯ ದೇವರಿಗೆ ನೌಕರರ ಸಂಘದ ಸಂಯುಕ್ತಾಶಯದಲ್ಲಿ 2023ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತಿಯುತ ರವಿಂದ ರ್ಕಯವರ ಅಧ್ಯಕ್ಷತೆಯಲ್ಲಿ 100, ವಿದ್ಯಾರ್ಥಿಗಳಿಗೆ ತಲಾ 2000 ರೂ.ಗಳಂತೆ ಪ್ರೋತ್ಸಾಹ ಧನ ಸರ ಫಲಕ ಹಾಗೂ ಪಶಸ್ತಿ ಪತ್ರವನ್ನು ನೀಡಲಾಯಿತು, ಆ ಸಂದರ್ಭದಲ್ಲಿ ಸುಮಾರು 2500 ಸಮಾಜದ ಬಂಧುಗಳು ಭಾಗವಹಿಸಿದ್ದು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಸರ್ವಕಾಲಿಕ ದಾಖಲೆಯಾಯಿತು.

ವಿದ್ಯಾನಿಧಿ ಯೋಜನೆಯ ಅಡಿಯಲ್ಲಿ 65 ಜನ ಮಹನೀಯರು ಮಹಾದೋಷಕರಾಗಿದ್ದಾರೆ, 6 ಸಾವಿರ ದೇವಾಂಗ ಬಂಧುಗಳು ಸಂಘದ ಸದಸ್ಯತ್ವವನ್ನು ಪಡೆದಿದ್ದಾರೆ. ಶೂನ್ಯದಲ್ಲಿದ್ದ ಸಂಘದ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿ ಪಡಿಸಲು ಸಂಘಕ್ಕೆ ಸದಸ್ಯತ್ವದ ಅಭಿಯಾನದ ಮೂಲಕ ಮತ್ತು ವಿದ್ಯಾನಿಧಿ ಯೋಜನೆಯ ಅಡಿಯಲ್ಲಿ ಸುಮಾರು 1 ಕೋಟಿ ಕ್ರೂಢೀಕರಿಸಿರುವುದು ಸಂಘದ ಸಾಧನೆಯಾಗಿದೆ.

2018-19 ರಲ್ಲಿ ನೆಲಮಂಗಲದ ಶ್ರೀಮಠದಲ್ಲಿ ಒಟ್ಟುರಿಗೆ 10 ಸಾವಿರ ರೂ.ಗಳಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ

ನಮ್ಮ ಸಮಾಜದ II ಜನ ಸಾಧಕರುಗಳಿಗೆ ದಾಸಿಮಯ್ಯ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಮಂಗಳೂರು: ನಗರದ ದೇವಾಂಗ ಭವನದಲ್ಲಿ ಉಚಿತ ದೇವಾಂಗ ವಧು-ವರರ ಸಮಾವೇಶ ನಡೆಸಲಾಯಿತು, ಸುಮಾರು 500ಕ್ಕೂ ಹೆಚ್ಚು ವಧು-ವರರು ಇದರ ಪ್ರಯೋಜನವನ್ನು ಪಡೆದರು.

ಹೊಸದುರ್ಗ ಮತ್ತು ಮಂಗಳೂರಿನಲ್ಲಿ ರಾಜ್ಯ ಸಂಘದ ವತಿಯಿಂದ “ಉದ್ಯೋಗ ಮೇಳವನ್ನು ಆಯೋಜನೆ ಮಾಡಿ ಸುಮಾರು 20ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡು, 1 ಸಾವಿರಕ್ಕೂ ಹೆಚ್ಚು ಉದ್ಯೋಗದ ಆಕಾಂಕ್ಷಿಗಳು ಭಾಗವಹಿಸಿ ಹಲವಾರು ಕಂಪನಿಗಳಲ್ಲಿ ಉದ್ಯೋಗವನ್ನು ಪಡೆದಿರುವುದು ಸಹ ಸಂಘದ ಯಶಸ್ವಿ ಕಾರ್ಯಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕದ ರಾಮದುರ್ಗ, ಬೆಳಗಾವಿ, ಧಾರವಾಡ, ಗದಗ ಇನ್ನಿತರೆ ಪ್ರದೇಶಗಳಲ್ಲಿ ನೇಕಾರ ಬಂಧುಗಳು ನೆರೆ ಹಾವಳಿಗೆ ತುತ್ತಾಗಿ ಸಂಕಷ್ಟದಲ್ಲಿದ್ದಾಗ ಬಟ್ಟೆ, ಧಾನ್ಯ, ಔಷಧಿ ಇನ್ನಿತರೆ ಆಗತ್ಯ ವಸ್ತುಗಳನ್ನು ರಾಜ್ಯ ಸಂಘದ ಮೂಲಕ ವಿತರಿಸಲಾಯಿತು.

ಕರೋನಾ ಸಂದರ್ಭದಲ್ಲಿ ನೋವು ಕಷ್ಟಗಳಿಗೆ ಸಿಲುಕಿದ ಬಡ ನೇಕಾರ ದೇವಾಂಗದವರಿಗೆ ರಾಜ್ಯ ಸಂಘದ ಕಛೇರಿಯಲ್ಲಿ (ಬನಶಂಕು, ಬೆಂಗಳೂರು) ಹಾಗೂ ಗೊಟ್ಟಿಗೆರೆ, ತಾತಗುಣಿ, ಕಮಾಕ್ಷಿಪಾಳ್ಯ, ಅನೇಕಲ್, ದೊಡ್ಡಬಳ್ಳಾಪುರ ಇನ್ನಿತರೆ ಪ್ರದೇಶಗಳಲ್ಲಿ ಆಹಾರದ ಕಿಟ್‌ಗಳನ್ನು ರಾಜ್ಯ ಸಂಘದ ಅಡಿಯಲ್ಲಿ ನೀಡಲಾಯಿತು.

ರಾಜ್ಯ ಸಂಘದ ಪದಾಧಿಕಾರಿಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿಂದಾಗ್ಗೆ ನಡೆಯುವ ಸಮುದಾಯ ಭವನ ಉದ್ಘಾಟನೆ, ಶ್ರೀ ಬನಶಂಕರಿ ಶ್ರೀ ಚೌಡೇಶ್ವರಿ ದೇವಸ್ಥಾನಗಳ ಉದ್ಘಾಟನೆ, ಬನದ ಹುಣ್ಣಿಮೆ ಕಾರ್ಯಕ್ರಮ, ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಸಮಾಜದ ಬಂಧುಗಳನ್ನು ಸಂಘಟಿಸುವ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ.

ಸಮಾಜದ ಸಂಘಟನೆ, ಜಾಗೃತಿ ಬಗ್ಗೆ ತಿಳುವಳಿಕೆ ಮೂಡಿಸುವುದು ಮತ್ತು ದೇವರ ದಾಸಿಮಯ್ಯನವರ ವಚನಗಳನ್ನು, ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಸಂಘವು ನಡೆಸಿಕೊಂಡು ಬರುತ್ತಿದೆ.

ಸಂಘದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವ ಸಲುವಾಗಿ ತನ್ನದೇ ಆದ ಆಡಳಿತ ಕಛೇರಿಯನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ತೆರೆಯಲಾಗಿದ್ದು, ಪ್ರತಿಭಾ ಪುರಸ್ಕಾರದ ಪೂರ್ವಭಾವಿ ಸಭೆಗಳನ್ನು ಹಾಗೂ ಕೈಮಾಸಿಕ ಕಾರ್ಯಕಾರಿ ಸಭೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಶಿಕ್ಷಣ, ಸಂಘಟನೆ, ಜಾಗೃತಿಯ ಮೂಲಕ ಸುಭದ್ರವಾದ ಸಮಾಜವನ್ನು ಕಟ್ಟುವ ಕೆಲಸಕ್ಕೆ ರಾಜ್ಯ ಸಂಘವು ಕಟಿಬದ್ಧವಾಗಿದೆ. ಈ ಮೇಲೆ ಹೇಳಿದ ಎಲ್ಲಾ ಅಂಶಗಳು ಸಂಘದ ಸಾಧನೆಗಳಾಗಿವೆ.

ಇನ್ನೂ ಹಲವು ಹತ್ತು ಕಾರ್ಯಗಳು ಅನುಷ್ಠಾನಕ್ಕೆ ಬರಬೇಕಾಗಿದೆ. ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಸಂಘವು ಪಯತ್ನದ ಹಾದಿಯಲ್ಲಿ ಸಾಗುತ್ತಿದೆ. “ಸಾಮೂಹಿಕ ನಾಯಕತ್ವ ಹಾಗೂ ಪ್ರಾದೇಶಿಕ ಸಮತೋಲನದ ಪ್ರಾತಿನಿಧ್ಯದ ಮೂಲಕ ಸಂಘವನ್ನು ಬಲವರ್ಧನೆ ಮಾಡಬೇಕೆಂಬುದೇ ಮುಖ್ಯ ಗುರಿಯಾಗಿದೆ. ಇನ್ನೂ ನಮ್ಮ ಮುಂದೆ ಇರುವ ಯೋಜನೆಗಳೆಂದರೆ, ಬೆಂಗಳೂರು ನಗರದಲ್ಲಿ ರಾಜ್ಯ ಸಂಘಕ್ಕೆ ಸಂತ ನಿವೇಶನವನ್ನು ಸರ್ಕಾರದ ಮೂಲಕ ಪಡೆಯಲು ನಮ್ಮ ಅಧ್ಯಕ್ಷರ ನಾಯಕತ್ವದಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಉಚಿತ ವಧು ವರ ಮಾಹಿತಿ ಕೇಂದ್ರದ ಸ್ಥಾಪನೆ, ಮಹಿಳಾ ಘಟಕದ ಸ್ಥಾಪನೆ, ವಕೀಲರು, ಡಾಕ್ಟ‌ಗಳು, ಇಂಜಿನಿಯರ್‌ಗಳು, ಶಿಕ್ಷಕರುಗಳ ಘಟಕಗಳನ್ನು ಸ್ಥಾಪಿಸುವದರ ಮೂಲಕ ಎಲ್ಲರನ್ನೂ ಒಂದೇ ವೇದಿಕೆಗೆ ಬೆಕೆಂದು ಒಗ್ಗೂಡಿಸುವ ಕೆಲಸವನ್ನು ಮಾಡುವುದರ ಮೂಲಕ ರಾಜ್ಯ ಸಂಘವನ್ನು ಶಕ್ತಿಯುತವನ್ನಾಗಿ ಮಾಡಿ ಸುಭದ್ರವಾದ ದೇವಾಂಗ ಸಮಾಜವನ್ನು ಕಟ್ಟಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ.

ದೇವಾಂಗ ಸಮಾಜದ ಬಂಧುಗಳೇ ಕರ್ನಾಟಕ ರಾಜ್ಯ ದೇವಾಂಗ ಸಂಘಕ್ಕೆ ಹೆಚ್ಚು ಹೆಚ್ಚು ಸದಸ್ಯರಾಗಬ ಸಂಘಟಿತರಾಗೋಣ, ರಾಜ್ಯ ಸಂಘವನ್ನು ಬಲಪಡಿಸಿ, ಹೊಸ ಹೊಸ ಆವಿಷ್ಕಾರಗಳೊಂದಿಗೆ ನವ ದೇವಾಂಗ ಸಮಾಜಕ್ಕೆ

“ಎಲ್ಲಾದರೂ ಇರು ಎಂಥಾದರೂ ಇರು, ಎಂದೆಂದಿಗೂ ನೀ ಮೊದಲು ದೇವಾಂಗದವನಾರು” ಅನ್ನುವ ಘೋಷಣೆಯೇ ಸಂಘದ ಧೈಯವಾಗಿದೆ.

॥ ಜೈ ದೇವಾಂಗ ॥    ॥ ಜೈ ಜೈ ದೇವಾಂಗ ॥